ವಿಜಯಪುರ: ತಾಂತ್ರಿಕ ತರಬೇತಿ ಸಂಸ್ಥೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.www.apprenticeshipindia.org/candidate registration ಬೆಂಗಳೂರು ವತಿಯಿಂದ ಐಟಿಐ ಫಿಟ್ಟರ್, ಟರ್ನರ್, ಮಷಿನಿಷ್ಟ್, ಶೀಟ್ ಮೆಟಲ್ ವರ್ಕರ್, ಫೌಂಡ್ರಿಮ್ಯಾನ್, ಕೋಪಾ, ಕಾರ್ಪೆಂಟರ್, ಮೆಕ್ಯಾನಿಕ್ ಆರ್ &ಎಸಿ, ಟೂಲ್ & ಡೈ ಮೇಕರ್ ಅಡ್ವಾನ್ಸ್ ಸಿಎನ್‌ಸಿ ಮಷಿನಿಂಗ್ ಹಾಗೂ ವೆಲ್ಡರ್ ಟ್ರೇಡ್ ಪಾಸಾದ ಅಭ್ಯರ್ಥಿಗಳಿಂದ ಅಪ್ರೆಂಟಿಶಿಪ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಅವಧಿಯಲ್ಲಿ ಸ್ಟೈಫಂಡ್ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ೨೦೨೩ರ ಡಿಸೆಂಬರ್ ೩೦ ಕೊನೆಯ ದಿನಾಂಕವಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೊಂದಣಿ ಮಾಡಿ ಅದರ ಪ್ರತಿಯೊಂದಿಗೆ ಜಿಲ್ಲಾ ಉದ್ಯೊಗ ವಿನಿಮಯ ಕಚೇರಿ ವಿಜಯಪುರ ಅಥವಾ www.hal-india.co.in ನಲ್ಲಿ ಖುದ್ದಾಗಿ ಅರ್ಜಿ ನಮೂನೆಗಳನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
