ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಿಗೆ ಶಾಸಕರ ಪ್ರಶ್ನೆ
ಇಂಡಿ: ರಾಜ್ಯದ ೩೧ ಜಿಲ್ಲೆಗಳ ಪೈಕಿ ೨೯ ಜಿಲ್ಲೆಗಳಲ್ಲಿ ಜಿ.ಟಿ.ಸಿ.ಸಿ ಕೇಂದ್ರಗಳಿವೆ. ಆದರೆ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಇಲ್ಲ. ಹೀಗಾಗಿ ವಿಜಯಪುರ ಜಿಲ್ಲೆಯ ಜಿ.ಟಿ.ಸಿ.ಸಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ( ಗವರಮೆಂಟ್ ಕಮ್ಯುನಿಟಿ ಟೆಕ್ನಿಕಲ್ ಸೆಂಟರ್) ಇಂಡಿಯಲ್ಲಿ ಪ್ರಾರಂಭಿಸಲು ಶಾಸಕ ಯಶವಂತರಾಯಗೌಡ ಪಾಟೀಲರು ವಿಧಾನಸಭೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಿಗೆ ಪ್ರಶ್ನೆ ಕೇಳಿದರು.
ಜಿ.ಟಿ.ಸಿ.ಸಿ ಕೇಂದ್ರ ಮಂಜೂರು ಮಾಡಲು ಅನುಸರಿಸಬೇಕಾದ ಮಾನದಂಡಗಳು ಇಂಡಿ ತಾಲೂಕಿನಲ್ಲಿವೆ.
ಇಂಡಿ ತಾಲೂಕು ಕಂದಾಯ ಉಪವಿಭಾಗಾಧಿಕಾರಿ ಕೇಂದ್ರವಾಗಿದೆ. ಮತ್ತು ಇಂಡಿ ಪಟ್ಟಣದ ವಸಂತನಗರದಲ್ಲಿ ರಿ.ಸ.ನಂ ೭೩೮ ರಲ್ಲಿ ಯೋಜನೆಗೆ ಅವಶ್ಯವಿರುವ ೧೯ ಎಕರೆ ಜಮೀನು ಇದೆ. ಹಾಗೂ ಮೂಲಭೂತ ಸೌಕರ್ಯಗಳಿವೆ. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆಯಲ್ಲಿ ಕೂಡ ತಿಳಿಸಲಾಗಿದೆ. ಸಂಬಂದಿತ ಕಡತ ಲಗತ್ತಿಸಿದೆ. ಅದಲ್ಲದೆ ಎ.ಐ.ಸಿ.ಟಿ.ಈ ಅಖಿಲ ಭಾರತ ತಾಂತ್ರಿಕ ಮಹಾವಿದ್ಯಾಲಯಗಳ ಒಕ್ಕೂಟದ ಮಾರ್ಗ ಸೂಚಿಯಂತೆ ಇಂಡಿ ತಾಲೂಕಿನಲ್ಲಿ ೩೯ ಪ್ರೌಢಶಾಲೆಗಳಿವೆ. ಔದ್ಯೋಗ ತರಬೇತಿ ಕೇಂದ್ರ, ಝಳಕಿಯಲ್ಲಿ ಸರಕಾರಿ ಪಾಲಿಟೆಕ್ನಿಕ್ ಮತ್ತು ಖಾಸಗಿ ಇಂಜಿನಿಯರಿಂಗ್ ಮಹಾವಿದ್ಯಾಲಯಗಳಿವೆ.
ಅದಲ್ಲದೆ ತಾಲೂಕಿನಲ್ಲಿ ಮೂರು ಸಕ್ಕರೆ ಕಾರ್ಖಾನೆ ಸೇರಿದಂತೆ ೫೦ ಕ್ಕೂ ಹೆಚ್ಚು ಸಣ್ಣ ಸಣ್ಣ ಕೈಗಾರಿಗೆ ಘಟಕಗಳಿವೆ ಎಂದು ಸದನಕ್ಕೆ ಸಭೆಯಲ್ಲಿ ಮನವರಿಕೆ ಮಾಡಿದರು.
ಇದಕ್ಕೆ ಉತ್ತರಿಸಿದ ವೈದ್ಯಕೀಯ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರು ಪ್ರಸ್ತಾವನೆ ಸರಕಾರದ ಹಂತದಲ್ಲಿದೆ. ಸಾಧಕ ಬಾಧಕ ಪರಿಶೀಲಿಸಿ ಅರ್ಥಿಕ ಇಲಾಖೆಯ ಸಹಮತ ಮೇಲೆ ಜಿ.ಟಿ.ಸಿ.ಸಿ. ಕೇಂದ್ರ ಇಂಡಿಯಲ್ಲಿ ಸ್ಥಾಪಿಸಲು ಪರಿಶೀಲಿಸಲಾಗುವದು ಎಂದು ಉತ್ತರ ನೀಡಿದರು.

