ವಿಜಯಪುರ: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯದ ಕುರಿತು ಡಿ.೮ ರಂದು ಸಂಜೆ ೬ ರಿಂದ ೮ ಗಂಟೆವರೆಗೆ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಡಿಪಿಐ ಎನ್.ಎಚ್.ನಾಗೂರ ಅವರು ತಿಳಿಸಿದ್ದಾರೆ.
ಮಾರ್ಚ್ನಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದಲ್ಲಿನ ಕಲಿಕೆ ಸಮಸ್ಯೆಗಳಿಗೆ ಮತ್ತು ಮಕ್ಕಳ ಪಾಲಕರು ಹಾಗೂ ಸಾರ್ವಜನಿಕರು ಪರೀಕ್ಷೆ ವಿಧಾನ ಹಾಗೂ ವಿಜ್ಞಾನ ವಿಷಯದ ಕುರಿತು ಇರುವ ತಮ್ಮ ಸಮಸ್ಯೆಗಳಿಗೆ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಕರೆ ಮಾಡಲು ಸಂಪರ್ಕಿಸಬೇಕಾದ ಸಂಖ್ಯೆ : ೯೪೪೮೯೯೯೩೩೧, ೯೮೮೦೭೪೫೨೧೫, ೯೦೦೮೮೯೪೧೦೬, ೯೯೦೨೫೩೮೬೬೨, ೯೯೭೨೧೪೧೬೮೨, ೮೯೭೧೦೨೨೬೨೬, ೯೬೬೩೧೫೩೮೪೪, ೬೩೬೦೯೩೭೩೩೮, ೯೭೩೧೧೯೧೬೨೨, ೯೯೦೨೪೭೪೭೦೭, ೯೮೮೦೫೫೭೪೨೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ದೂರವಾಣಿ ನಂಬರಗಳನ್ನು ನೀಡಲಾಗುವುದು. ಎಲ್ಲಾ ವಿಷಯಗಳ ಕುರಿತು ಕರೆ ಮಾಡಲು ಜಿಲ್ಲೆಯ ಎಲ್ಲಾ ಸರಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಹಾಗೂ ಸಹ ಶಿಕ್ಷಕರ ಕಡೆಗೆ ಫೋನ್ ನಂಬರ್‌ಗಳು ಲಭ್ಯವಿರಲಿದ್ದು, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಈ ಫೋನ್ ಇನ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಡಿ.೮ರಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮ
Related Posts
Add A Comment
