ವಿಜಯಪುರ: ಜಿಲ್ಲೆಯ ಅವಧಿ ಮುಕ್ತಾಯವಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗದಿಂದ ವೇಳಾಪಟ್ಟಿಯನ್ನು ನಿಗದಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತಿಗೆ ಸಾರ್ವತ್ರಿಕೆ ಚುನಾವಣೆ ಹಾಗೂ ಮುದ್ದೇಬಿಹಾಳ ಪುರಸಭೆಯ ವಾರ್ಡ ನಂ.೧೮ ಮತ್ತು ಮನಗೂಳಿ ಪಟ್ಟಣ ಪಂಚಾಯತಿಯ ವಾರ್ಡ ನಂ.೭ಕ್ಕೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ವೇಳಾಪಟ್ಟಿಯಂತೆ ಡಿ.೮ರಂದು ಚುನಾವಣಾ ಅಧಿಸೂಚನೆ ಹೊರಡಿಸುವುದು, ನಾಮಪತ್ರಗಳನ್ನು ಸಲ್ಲಿಸಲು ಡಿ.೧೫ ಕೊನೆಯ ದಿನಾಂಕ, ಉಮೇದುವಾರಿಕೆಗಳನ್ನು ಹಿಂತೆಗದುಕೊಳ್ಳಲು ಡಿ.೧೮ ಕೊನೆಯ ದಿನಾಂಕ, ಅವಶ್ಯಕವಿದ್ದರೆ ದಿನಾಂಕ : ೨೭-೧೨-೨೦೨೩ ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ಗಂಟೆಯವರೆಗೆ ಮತದಾನ ಮತ್ತು ಮರು ಮತದಾನ ಅವಶ್ಯವಿದ್ದಲ್ಲಿ ತಾಲೂಕಿನ ಕೇಂದ್ರ ಸ್ಥಳದಲ್ಲಿ ಡಿ.೩೦ರಂದು ಬೆಳಿಗ್ಗೆ ೮ ಗಂಟೆಯಿಂದ ಮರು ಮತದಾನ ಹಾಗೂ ಡಿ.೩೦ ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನವಾಗಿದೆ.
ಚಡಚಣ ಪಟ್ಟಣ ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ವಾರ್ಡ ನಂ.೧ಕ್ಕೆ ಪರಿಶಿಷ್ಟ ಪಂಗಡ, ವಾರ್ಡ ನಂ.೨ ಹಿಂದುಳಿದ ವರ್ಗ-ಎ(ಮಹಿಳೆ), ವಾರ್ಡ ನಂ.೩ ಸಾಮಾನ್ಯ, ವಾರ್ಡ ನಂ.೪ ಹಿಂದುಳಿದ ವರ್ಗ-ಬಿ, ವಾರ್ಡ ನಂ.೫ ಹಿಂದುಳಿದ ವರ್ಗ-ಎ, ವಾರ್ಡ ನಂ.೬ ಸಾಮಾನ್ಯ, ವಾರ್ಡ ನಂ.೭ ಪರಿಶಿಷ್ಟ ಜಾತಿ (ಮಹಿಳೆ), ವಾರ್ಡ ನಂ.೮ ಸಾಮಾನ್ಯ (ಮಹಿಳೆ), ವಾರ್ಡ ನಂ.೯ ಸಾಮಾನ್ಯ, ವಾರ್ಡ ನಂ.೧೦ ಪರಿಶಿಷ್ಟ ಜಾತಿ, ವಾರ್ಡ ನಂ.೧೧ ಸಾಮಾನ್ಯ, ವಾರ್ಡ ನಂ.೧೨ ಹಿಂದುಳಿದ ವರ್ಗ-ಎ, ವಾರ್ಡ ನಂ.೧೩ ಸಾಮಾನ್ಯ (ಮಹಿಳೆ), ವಾರ್ಡ ನಂ.೧೪ ಸಾಮಾನ್ಯ (ಮಹಿಳೆ), ವಾರ್ಡ ನಂ.೧೫ ಪರಿಶಿಷ್ಟ ಜಾತಿ ಹಾಗೂ ವಾರ್ಡ ನಂ.೧೬ ಸಾಮಾನ್ಯ (ಮಹಿಳೆ)ಗೆ ಮೀಸಲಿರಿಸಲಾಗಿದೆ.
ಉಪ ಚುನಾವಣೆ ಜರುಗುವ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತಿಯ ವಾರ್ಡ ೭ರಕ್ಕೆ ಸಾಮಾನ್ಯ ಹಾಗೂ ಮುದ್ದೇಬಿಹಾಳ ತಾಲೂಕಿನ ಮುದ್ದೇಬಿಹಾಳ ಪುರಸಭೆ ವಾರ್ಡ ನಂ.೧೮ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ.
ಚಡಚಣ ಪಟ್ಟಣ ಪಂಚಾಯತಿಯ ೧೬ ವಾರ್ಡಗಳಿಗೆ ಜರುಗುವ ಸಾರ್ವತ್ರಿಕ ಚುನಾವಣೆಗೆ ೧೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಹಾಗೂ ಉಪ ಚುನಾವಣೆಗೆ ವಾರ್ಡಿಗೆ ಒಂದರಂತೆ ಒಂದೊಂದು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಸದಾಚಾರ ಸಂಹಿತಯು ದಿನಾಂಕ : ೦೮-೧೨-೨೦೨೩ ರಿಂದ ದಿನಾಂಕ : ೩೦-೧೨-೨೦೨೩ರವರೆಗೆ ಸಾರ್ವತ್ರಿಕ ಚುನಾವಣೆ ನಡೆಯುವ ಚಡಚಣ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹಾಗೂ ಉಪ ಚುನಾವಣೆಗಳು ನಡೆಯುವ ಮನಗೂಳಿ ಪಟ್ಟಣ ಪಂಚಾಯತ್‌ನ ವಾರ್ಡ ನಂ.೦೭ ಹಾಗೂ ಮುದ್ದೇಬಿಹಾಳ ಪುರಸಭೆಯ ವಾರ್ಡ ನಂ.೧೮ರ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ. ಸದಾಚಾರ ಸಂಹಿತೆಯು ಉಲ್ಲಂಘನೆಯಾಗದಂತೆ ನಿಗಾ ವಹಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

