ಮುದ್ದೇಬಿಹಾಳ: ಉತ್ತರ ಕನ್ನಡ ಜಿಲ್ಲೆ ಶಿರಸಿಯ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧೀಶರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ೨೦೦೭ರಿಂದ ನಾಡಿನಾದ್ಯಂತ ಗೀತಾ ಅಭಿಯಾನ ಹಮ್ಮಿಕೊಂಡಿದ್ದು ಈ ಬಾರಿಯೂ ಗೀತೆಯ ೧೦ನೇ ಅಧ್ಯಾಯದ ಕಂಠಪಾಠ ಮತ್ತು ಭಾಷಣ ಸ್ಪರ್ಧೆಯನ್ನು ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆಯಲಿವೆ.
ಪ್ರಾಥಮಿಕ ವಿಭಾಗ(೫ ರಿಂದ ೭ನೇ ತರಗತಿ), ಪ್ರೌಢ ವಿಭಾಗ (೮ ರಿಂದ ೧೦ನೇ ತರಗತಿ) ಪದವಿ ಪೂರ್ವ ವಿಭಾಗ (೧೧ ಮತ್ತು ೧೨ನೇ ತರಗತಿ) ವಿದ್ಯಾರ್ಥಿಗಳಿಗೆ ಪ್ರತಿ ಸ್ಪರ್ಧೆಗಳಿಗೆ ಒಂದು ಶಾಲೆಯಿಂದ ಒಂದು ವಿದ್ಯಾರ್ಥಿ ಭಾಗವಹಿಸಲು ಅವಕಾಶವಿರುತ್ತದೆ. ಕಂಠಪಾಠ ಸ್ವರ್ಧೆ ೫ನಿಮಿಷಗಳದ್ದಾಗಿರುತ್ತದೆ. ನಿರ್ಣಾಯಕರು ಸೂಚಿಸಿದ ಯಾವುದೆ ೧೦ಶ್ಲೋಕವನ್ನು ಕ್ರಮವಾಗಿ ಪಠಿಸಬೇಕಾಗಿರುತ್ತದೆ. (ಯೂಟ್ಯೂಬ್ ಲಿಂಕ https://youtu.be/BzOAO102K-U?feature=shared ಇದರಲ್ಲಿ ಲಭ್ಯವಿರುವ ೧೦ನೇ ಅಧ್ಯಾಯವನ್ನು ಅಭ್ಯಾಸ ಮಾಡಿರಬೇಕು.)
ಮೂರು ಹಂತಗಳಲ್ಲಿ ನಡೆಯುವ ೫ ನಿಮಿಷಗಳ ಕಾಲಾವಧಿಯ ಭಾಷಣ ಸ್ಪರ್ಧೆಗೆ ಪ್ರಾಥಮಿಕ ವಿಭಾಗಗಳಿಗೆ ವಿಷಯ ಭಗವದ್ಗೀತೆಯಿಂದ ಜೀವನ ಸಮೃದ್ಧಿ, ಪ್ರೌಢ ವಿಭಾಗದ ವಿಷಯ ಭಗವದ್ಗೀತೆಯಿಂದ ಭಾರತಕ್ಕೆ ವಿಶ್ವ ಮಾನ್ಯತೆ, ಪದವಿ ಪೂರ್ವ ವಿಭಾಗದ ವಿಷಯ ಪ್ರಜಾಪ್ರಭುತ್ವ ಸಂಪೂರ್ಣ ಸಾಕಾರಗೊಳ್ಳಲು ಪ್ರತಿಯೊಬ್ಬನಿಗೂ ಭಗವದ್ಗೀತೆ. ತಾಲೂಕಾ ಹಂತದಲ್ಲಿ ಪ್ರಥಮ, ದ್ವಿತೀಯ ಪಡೆದ ವಿದ್ಯಾರ್ಥಿಗಳು ಮಾತ್ರ ಡಿಸೆಂಬರ್ ೧೭ರಂದು ನಡೆಯುವ ಜಿಲ್ಲಾ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ತಾಲೂಕಾ ಮಟ್ಟದ ಸ್ಪರ್ಧೆಯನ್ನು ಡಿಸೆಂಬರ್ ೧೬ರಂದು ಶನಿವಾರದಂದು ಮುಂ.೧೦.೩೦ ಗಂಟೆಗೆ ಪಟ್ಟಣದ ತಂಗಡಗಿ ರಸ್ತೆ ಪಕ್ಕದ ಪಿಲೇಕಮ್ಮ ನಗರದಲ್ಲಿರುವ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ನಡೆಸಲಾಗುತ್ತದೆ.
ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವ ಮಕ್ಕಳ ಯಾದಿಯನ್ನು ಆಯಾ ಶಾಲೆಯ ಶಿಕ್ಷಕರು ಡಿಸೆಂಬರ್೧೪ರ ಒಳಗಾಗಿ ಮೋಬೈಲ್ ೯೪೮೦೪೬೨೧೭೯ ಸಂಖ್ಯೆಗೆ ವಾಟ್ಸ್ಅಪ್ ಮೂಲಕ ಕಳುಹಿಸಿರಬೇಕು. ಅಲ್ಲದೆ ದಿನಾಂಕ ೭ ಡಿಸೆಂಬರನಿಂದ ೧೩ ಡಿಸೆಂಬರ ವರೆಗೆ ಗೀತಾ ಅಭಿಯಾನವನ್ನು ತಾಲೂಕಿನಾದ್ಯಂತ ನಡೆಸಲಾಗುವುದು. ಗೀತಾ ಅಭಿಯಾನದ ಹೆಚ್ಚಿನ ಮಾಹಿತಿಗಾಗಿ ಜ್ಞಾನ ಭಾರತಿ ವಿದ್ಯಾ ಮಂದಿರದ ಅಧ್ಯಕ್ಷರಾದ ಬಿ.ಪಿ.ಕುಲಕರ್ಣಿ(ಮೋ೯೯೭೨೨೯೧೩೬೧), ಜಿಲ್ಲಾ ಅಭಿಯಾನ ಸಮಿತಿಯ ಉಪಾಧ್ಯಕ್ಷರಾದ ಡಾ.ಪರಶುರಾಮ ಪವಾರ (ಮೊ:೯೪೪೯೬೬೧೮೯೭), ವಿದ್ಯಾ ಭಾರತಿ ಜಿಲ್ಲಾ ಅಧ್ಯಕ್ಷರಾದ ಪ್ರಭು.ಎಸ್.ಕಡಿ(ಮೋ ೯೭೩೧೨೫೫೭೬೬), ಜ್ಞಾನ ಭಾರತಿ ವಿದ್ಯಾ ಮಂದಿರದ ನಿವೃತ್ತ ಮುಖ್ಯಗುರುಮಾತೆ ಶಾಂತಾ ಭಟ್ಟ(ಮೋ೯೪೪೯೭೧೨೦೪೦) ಇವರನ್ನು ಮತ್ತು ಸ್ಪರ್ಧೆ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ವಿಷಯ ಪ್ರಮುಖರಾದ ಶ್ರೀರಾಮ ಜಿ. (ಮೋ೯೪೮೧೫೭೫೮೫೪), ಸಂಪರ್ಕಿಸಬಹುದೆಂದು ತಾಲೂಕಾ ಅಭಿಯಾನದ ಸಂಚಾಲಕ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆ ಮುಖ್ಯಾಧ್ಯಾಪಕ ರಾಮಚಂದ್ರ ಹೆಗಡೆ(ಮೋ:೯೪೮೦೪೬೨೧೭೯) ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
