ದೇವರಹಿಪ್ಪರಗಿ: ೧೨ನೇ ಶತಮಾನದ ಅಸಂಖ್ಯಾತ ಶರಣರಲ್ಲಿ ಚನ್ನಬಸವಣ್ಣನವರು ಸಾಮಾಜಿಕ ಬದಲಾವಣೆಯ ಹರಿಕಾರರಾಗಿ “ಚಿನ್ಮಯಜ್ಞಾನಿ’ ಎನಿಸಿದ್ದಾರೆ ಎಂದು ಶರಣಸಂಗಮ ಸೇವಾ ಸಮೀತಿ ತಾಲ್ಲೂಕು ಅಧ್ಯಕ್ಷ ಸಂಗಪ್ಪ ತಡವಲ್ ಹೇಳಿದರು.
ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಚನ್ನಬಸವಣ್ಣನವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಅನುಭವ ಮಂಟಪದ ಎರಡನೆಯ ಶೂನ್ಯ ಪೀಠಾಧೀಶರಾಗಿದ್ದ ಚನ್ನಬಸವಣ್ಣ ಪ್ರತಿಯೊಂದು ವಚನಗಳಿಗೆ ಅಂತಿಮವಾಗಿ ಒಪ್ಪಿಗೆಯನ್ನು ಕೊಡುವ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಅಂತೆಯೇ ತಮ್ಮ ೨೧ನೇ ವರ್ಷದಲ್ಲಿ ಖಡ್ಗ ಹಿಡಿದು ಕನ್ನಡ ಶರಣ ಸಾಹಿತ್ಯವನ್ನು ರಕ್ಷಣೆ ಮಾಡುವುದರ ಮೂಲಕ ಷಟಸ್ಥಲಜ್ಞಾನಿ ಎನಿಸಿದ್ದರು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆ. ಬದುಕಿದ್ದು ಕೇವಲ ಇಪ್ಪತ್ತನಾಲ್ಕು ವರ್ಷಗಳು ಮಾತ್ರ. ಕೊನೆಗೆ ಉಳವಿಯಲ್ಲಿಯೇ ಲಿಂಗೈಕ್ಯರಾದರು ಎಂದು ಚನ್ನಬಸವಣ್ಣನವರ ಹಿರಿಮೆಯ ಕುರಿತು ಮಾಹಿತಿ ನೀಡಿದರು.
ರಾಣಿ ಕುಂಬಾರ ಹಾಗೂ ಸಂಗಡಿಗರು ವಚನಪಠಣ ಮೂಲಕ ಪ್ರಾರ್ಥನೆ ಪ್ರಸ್ತುತಪಡಿಸಿದರು. ನಿಂಗು ಜಡಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿ ಶರಣರ ವಚನಗಳನ್ನು ವಾಚಿಸಿದರು.
ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಿ.ಸಿ.ಹಿರೇಮಠ, ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ, ಚನ್ನಪ್ಪ ದೇಸಾಯಿ, ಬಸವರಾಜ ಕುಂಬಾರ, ಕಾಶೀನಾಥ ರಾಮಗೊಂಡ, ಗೋಲ್ಲಾಳ ಬಿರಾದಾರ, ಬಸಪ್ಪ ಕುಂಬಾರ, ಮಲ್ಲಪ್ಪ ಹಳಿಮನಿ, ಹಣಮೇಶ ನಂದ್ಯಾಳ, ಕಾಸಪ್ಪ ಕುಂಬಾರ, ಬಸವರಾಜ ದೊಡಮನಿ ಸೇರಿದಂತೆ ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

