ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಹಿರೇಬೇವನೂರದ ಇಂಡಿಯನ್ ಕೇನ್ ಪಾವರ ಲಿಮಿಟೆಡ್ ಸಕ್ಕರೆ ಕಾರ್ಖಾನೆ ಎದುರು ಇಂದು ರವಿವಾರ ಕಬ್ಬಿಗೆ ಬೆಂಬಲ ಬೆಲೆ ೩೬೦೦ ರೂ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಒಂದು ವೇಳೆ ಕಬ್ಬಿಗೆ ಬೆಂಬಲ ಬೆಲೆ ರೂ ೩೬೦೦ ರೂ ನೀಡದಿದ್ದರೆ ಕಾರ್ಖಾನೆಯ ಮುಖ್ಯ ಬಾಗಲಿಗೆ ಬೀಗ ಹಾಕಿ ಒಳಗೆ ಕಬ್ಬು ಬರದಂತೆ ಪ್ರತಿಭಟಿಸಲಾಗುತ್ತದೆ. ಮತ್ತು ರೂ ೩೬೦೦ ನೀಡುವ ವರೆಗೆ ಪ್ರತಿಭಟನೆ ಮಾಡಲಾಗುವದೆಂದರು.
ಬೆಳಗಾAವ ಮತ್ತು ಬಾಗಲಕೋಟ ಜಿಲ್ಲೆಯ ರೈತರು ಈಗಾಗಲೇ ರೂ ೩೬೦೦ ಕೊಡಲು ಒಪ್ಪಿದ್ದು ವಿಜಯಪುರ ಜಿಲ್ಲೆಯ ರೈತರಿಗೆ ಏಕೆ ತಾರತಮ್ಯ ಎಂದರು.
ಕಾರ್ಖಾನೆಯ ಮ್ಯಾನೆಜಿಂಗ ಡೇರೆಕ್ಟರ್ ಸೂರ್ಯ ಪ್ರಕಾಶ ಘಟನಾ ಸ್ಥಳಕ್ಕೆ ಬಂದು ಮಾತನಾಡಿ ತಮ್ಮ ಮನವಿಯನ್ನು ಮಾಲಿಕರ ಜೊತೆ ಚರ್ಚಿಸುವದಾಗಿ ಮತ್ತು ಸೋಮವಾರ ೧೨ ಗಂಟೆಯ ವರೆಗೆ ಕಾಲಾವಕಾಶ ಕೇಳಿದರು.
ಪ್ರತಿಭಟನೆಯಲ್ಲಿ ಸಿದ್ದರಾಮ ಹಂಜಗಿ, ಶಿವಾನಂದ ಬಿರಾದಾರ, ಗುರು ಅಲಗೊಂಡ, ಶಿವಶಂಕರ ಮೇತ್ರಿ, ಸೋಮು ಬಿರಾದಾರ, ರವಿ ಪವಾಡಿ, ಸೋಮು ಕುಂಬಾರ, ಬಾಬುಷಾ ಸೋಲಾಪುರ, ನಿಂಗಪ್ಪ ಯರಗಲ್ಲ, ಅಶೋಕ ಹಿಕ್ಕಣಗುತ್ತಿ ಮತ್ತಿತರಿದ್ದರು.
ಫೋಟೋ- ೮ ಇಂಡಿ ೦೨
ಇಂಡಿ ತಾಲೂಕಿನ ಹಿರೇಬೇವನೂರ ಸಕ್ಕರೆ ಕಾರ್ಖಾನೆ ಎದುರು ರೈತರು ಪ್ರತಿಭಟನೆ ನಡೆಸಿದರು.

