ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ನಿವಾಸಿ ಹಾಗೂ ಹಿರಿಯ ಜೀವಿ ಸುಮಿತ್ರಪ್ಪ ಸಾಹು ಅಂಗಡಿ ಅವರು ಬುಧವಾರ ನಿಧನರಾದರು. ಮೃತರು ಪತ್ನಿ, ಮೂರು ಜನ ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ:
ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದ ಕೆಂಭಾವಿಯ ಹಿರಿಯ ವರ್ತಕ ಸುಮಿತ್ರಪ್ಪ ಸಾಹು ಅಂಗಡಿ ಅವರ ಅಗಲಿಕೆಗೆ ಹಿರೇಮಠದ ಪೀಠಾಧಿಪತಿ ಶ್ರೀ ಚನ್ನಬಸವ ಶಿವಾಚಾರ್ಯ ಸ್ವಾಮೀಜಿಗಳು ಸೇರಿದಂತೆ ಜಿಲ್ಲೆಯ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಹಲವು ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ. ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಪಾಟೀಲ್ ಯಾಳಗಿ, ಹಿರಿಯ ಸಾಹಿತಿ ಲಿಂಗನಗೌಡ ಮಾಲಿಪಾಟೀಲ್, ಜಿ.ಪಂ. ಮಾಜಿ ಅಧ್ಯಕ್ಷ ಸಿದ್ದನಗೌಡ ಪೊ. ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಹೈಕೋರ್ಟ್ ನ್ಯಾಯವಾದಿ ಜೆ. ಅಗಷ್ಟಿನ್, ವಾಮನರಾವ್ ದೇಶಪಾಂಡೆ, ಹಿರಿಯ ಸಾಹಿತಿ ಶ್ರೀನಿವಾಸ್ ಜಾಲವಾದಿ, ಬಸವರಾಜ್ ಜಮದರಖಾನಿ, ನಿವೃತ್ತ ಡಿ.ವೈ.ಎಸ್.ಪಿ. ಸಿ.ಎನ್. ಭಂಡಾರೆ, ತಾಲೂಕು ಕಸಾಪ ಅಧ್ಯಕ್ಷ ಶರಣಬಸ್ಸು ಯಾಳವಾರ, ಹೆಚ್ ರಾಠೋಡ್
ಪ್ರಕಾಶ ಅಂಗಡಿ, ನಬಿಲಾಲ ಮಕಂದಾರ್, ಸಂಜೀವರಾವ್ ಕುಲ್ಕರ್ಣಿ, ಮೋಹನರಡ್ಡಿ ಡಿಗ್ಗಾವಿ, ಅಶೋಕ ಸೊನ್ನದ್, ಬಸಣ್ಣ ಸಾಹು ಬೂದೂರ, ಡಾ. ಯಂಕನಗೌಡ ಪಾಟೀಲ್, ವೀರಣ್ಣ ಕಲಕೇರಿ, ನಿಂಗನಗೌಡ ದೇಸಾಯಿ, ಸಂಗಣ್ಣ ಸಾಹು ತುಂಬಗಿ, ರವಿಶಂಕರ್ ಸೊನ್ನದ್, ಸಾಹೇಬಲಾಲ್ ಆಂದೆಲಿ, ಮಡಿವಾಳಪ್ಪ ಹೆಗ್ಗಣದೊಡ್ಡಿ ಸೇರಿದಂತೆ ಜಿಲ್ಲೆಯ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ವರ್ತಕರ ಬಳಗ ಮತ್ತು ಮುಖಂಡರು ಮೃತರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
’ಉದಯರಶ್ಮಿ’ ಬಳಗದಿಂದ ಭಾವಪೂರ್ಣ ಶ್ರದ್ಧಾಂಜಲಿ
ಕೆಂಭಾವಿಯ ಹಿರಿಯ ವರ್ತಕ ಸುಮಿತ್ರಪ್ಪ ಸಾಹು ಅಂಗಡಿ ನಿಧನಕ್ಕೆ “ಉದಯರಶ್ಮಿ” ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಹಾಗೂ ಕುಟುಂಬ ವರ್ಗ ಮತ್ತು ಪತ್ರಿಕಾ ಬಳಗ ಸಂತಾಪ ವ್ಯಕ್ತಪಡಿಸಿ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬ ವರ್ಗಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

