ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಕಲೆ, ಸಾಹಿತ್ಯ, ಸಂಸ್ಕೃತಿ, ಕಲಾವಿದರ ಉಳುವಿಗಾಗಿ – ಬೆಳವಿಗಾಗಿ, ಮುಂಬರುವ ಡಿಸೆಂಬರ ಕೊನೆಯಲ್ಲಿ ಕಲ್ಯಾಣ ಕರ್ನಾಟಕ ಕೇಂದ್ರ ಸ್ಥಾನವಾದ ಕಲ್ಬುರ್ಗಿಯಲ್ಲಿ, ರಾಜ್ಯಾಧ್ಯಕ್ಷರಾದ ಎಂ, ಎಸ್, ರವೀಂದ್ರ ಮತ್ತು ನಮ್ಮಕಲಬುರ್ಗಿ ಜಿಲ್ಲಾ ಕೆಎಫ್ಸಿ ಗೌರವಾಧ್ಯಕ್ಷರಾದ ಶ್ರೀ ಮಹಿಪಾಲರೆಡ್ಡಿ ಮುನ್ನೂರ್ ಅವರ ನೇತೃತ್ವದಲ್ಲಿ ಕನ್ನಡ ಫಿಲಂ ಚೇಂಬರ್ ಜಿಲ್ಲಾ ಘಟಕದ ವತಿಯಿಂದ ರಂಗಭೂಮಿ, ಮತ್ತು ಚಲನಚಿತ್ರ ಜೊತೆಗೆ ಸಮಸ್ತ ಕಲಾವಿದರ ಸಮ್ಮೇಳನವನ್ನು ಆಯೋಜಿಸಲಾಗುವದೆಂದು, ಕನ್ನಡ ಫಿಲಂ ಚೇಂಬರ್ ಕಲಬುರ್ಗಿ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ತಿಳಿಸಿದರು.
ಪಟ್ಟಣದ ಶ್ರೀ ವಿರಕ್ತ ಮಠದಲ್ಲಿ ಸರಳವಾಗಿ ಜರುಗಿದ ಕನ್ನಡ ಫಿಲಂ ಚೇಂಬರ್ ಪದಾಧಿಕಾರಿಗಳ ನೇಮಕಾತಿ ಪ್ರಮಾಣ ಪತ್ರ ಪ್ರಧಾನ ಸಮಾರಂಭದಲ್ಲಿ,
ಮಾತನಾಡಿದ ಅವರು, ಕನ್ನಡ ಫಿಲಂ ಚೇಂಬರ್ ಸದಸ್ಯತ್ವವೆನ್ನುವದು ದುಬಾರಿ ಶುಲ್ಕದ ಪರಿಣಾಮವಾಗಿ ಗಗನ ಕುಸುಮವಾಗಿತ್ತು ಆದರೆ ಈಗ ಮೂಲ ಚೇಂಬರ್ ಗೆ ಪರ್ಯಾಯವಾಗಿ ಕನ್ನಡ ಫಿಲಂ ಚೇಂಬರ್ ಗಳು ಸೃಷ್ಟಿಯಾಗಿರುವದರಿಂದ ಸಣ್ಣ ಕಲಾವಿದರಿಗೆ, ನಿರ್ಮಾಪಕ ರಿಗೆ, ತಂತ್ರಜ್ಞರಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಆದರಿಂದ ಎಲ್ಲರೂ ಅದರ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಮುಖ್ಯವಾಗಿ ನಮ್ಮ ಭಾಗದ ಕಲಾವಿದರು ಮುನ್ನೆಲೆಗೆ ಬರಬೇಕು, ನಮ್ಮಯ ಕಲಾವಿದರನ್ನು ಚಿತ್ರರಂಗದಿ ಮುನ್ನೆಲೆಗೆ ತರಲು ಕನ್ನಡ ಫಿಲಂ ಚೇಂಬರ್ ಕಂಕಣಬದ್ದವಾಗಿದೆ, ಅದಕ್ಕಾಗಿ ಸರ್ವರಂಗದ ಸಹಕಾರದ ಅವಶ್ಯವಿದೆ, ಎಲ್ಲರು ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿದರು.
ಕಾರ್ಯಕ್ರಮ ದಿವ್ಯ ಸಾನಿಧ್ಯವಹಿಸಿದ ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಪದಾಧಿಕಾರಿಗಳಾದ, ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ (ಜಿಲ್ಲಾಧ್ಯಕ್ಷರು )
ರಾಜಶೇಖರ ಆರ್ ಡಗ್ಗಾ,( ಉಪಾಧ್ಯಕ್ಷರು )
ಅಮೃತ ದೊಡಮನಿ ( ಉಪಾಧ್ಯಕ್ಷರು )
ಕೆ ಕೆ ದೇಸಾಯಿ( ಪ್ರಧಾನ ಕಾರ್ಯದರ್ಶಿಗಳು )
ರೇವಣಸಿದ್ದಪ್ಪ ಬಿ ಬೆಲ್ಲದ್ (ಪ್ರಧಾನ ಕಾರ್ಯದರ್ಶಿಗಳು)
ಚಿಂತನಗೌಡ ಪಾಟೀಲ್ ( ಖಜಾಂಚಿ )
ವೀರೇಶ ಕುಂಬಾರ್, ರಮೇಶ ತುಪ್ಪದ್, ಕರೆಪ್ಪ ಹೊಸಮನಿ (ನಿರ್ದೇಶಕರು )ಅವರುಗಳಿಗೆ ನೇಮಕಾತಿ ಪತ್ರ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ದೇವಿಂದ್ರಪ್ಪಗೌಡ ಸರಕಾರ, ಮಲ್ಲಾರಾವ್ ಕುಲಕರ್ಣಿ, ಬಸ್ಸೇಟೆಪ್ಪ ವಾರದ್, ಅಪ್ಪು ಪುರಾಣಿಕ್, ಲಕ್ಷ್ಮೀಕಾಂತ ಸೋನಾರ್ ಮತ್ತಿತರರು ಇದ್ದರು.

