ಸಿ ಸಿ ರಸ್ತೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಅಶೋಕ ಮನಗೂಳಿ ಭರವಸೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಭೀಮಾ ನದಿಯ ದಡಯಲ್ಲಿರುವ ಹಳ್ಳಿಗಳ ಜನರು ಸೊನ್ನ ಏತ ನೀರಾವರಿ ಹಿನ್ನೀರಿನಿಂದ ಬಾಧಿತ ಒಳಗಾಗಿ ಇಲ್ಲಿನ ಜನರು ಮನೆ, ಮಠಗಳನ್ನು, ನೂರಾರು ಎಕರೆ ಜಮೀನುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿ ಅವಕಾಶಗಳಿಂದ ವಂಚಿತರಾಗಿದ್ದಾರೆ ಈ ಎಲ್ಲಾ ಗ್ರಾಮಗಳನ್ನು ಪುನಶ್ಚೇತನ ಗೊಳಿಸುವದರ ಜೊತೆಗೆ ಎಲ್ಲಾ ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಸರಕಾರ ಒದಗಿಸಬೇಕಾಗಿತ್ತು. ಯಾವದೋ ಕಾರಣಗಳಿಂದ ನೆನೆಗುಂದಿಗೆ ಬಿದ್ದಿರುವ ಎಲ್ಲಾ ಕಾಮಗಾರಿಗಳನ್ನು ಹಂತ ಹಂತವಾಗಿ ಈ ಭಾಗದ ಎಲ್ಲಾ ಗ್ರಾಮಗಳಿಗೆ ತಂದು ಮುಟ್ಟಿಸುವಂತೆ ಮಾಡುವುದು ನನ್ನ ಕರ್ತವ್ಯವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾರಾಪುರ ಗ್ರಾಮದಲ್ಲಿ ರವಿವಾರ ದಿನಸ 2024- 25 ನೇ ಸಾಲಿನ ಮಳೆ ಪರಿಹಾರ ಯೋಜನೆಯ ಆಡಿಯಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ಸಿ ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ತಾರಾಪುರ, ತಾವರಖೇಡ, ಮದನಹಳ್ಳಿ, ಬ್ಯಾಡಗಿಹಾಳ ಗ್ರಾಮಗಳನ್ನು ಭೀಮಾ ನದಿಯ ಹಿನ್ನೀರಿನಿಂದ ಪುನರ್ವಸತಿ ಆದಂತ ಗ್ರಾಮಗಳು ಮೂಲಭೂತ ಸೌಕರ್ಯಗಳಿಗೆ ವಂಚಿತವಾದ ಗ್ರಾಮಗಳಿಗೆ ಈಗಾಗಲೇ ಒಂದಷ್ಟು ಹಣ ಮಂಜೂರಾಗಿದ್ದು ಇನ್ನೂ ಉಳಿದ ತಾರಾಪುರ ಗ್ರಾಮದ ಪುನರ್ವಸತಿ ಗ್ರಾಮದಲ್ಲಿ ಬಾಕಿ ಉಳಿದಂತ ಕಾಮಗಾರಿಕೆಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು
ಕಾರ್ಯಕ್ರಮದ ಸಾನಿಧ್ಯ ಗುರುಲಿಂಗ ಶಿವಾಚಾರ್ಯರು ವಹಿಸಿಕೊಂಡರು
ಮುಖ್ಯ ಅತಿಥಿಗಳಾಗಿ ರಮೇಶ್ ಬಂಟನೂರ ನಾಗರಿಕ ವೇದಿಕೆಯ ಅಧ್ಯಕ್ಷರು ಆಲಮೇಲ. ಪ್ರಭು ವಾಲಿಕಾರ ಮಾಜಿ ಎಪಿಎಂಸಿ ಅಧ್ಯಕ್ಷರು ಆಲಮೇಲ. ಸಾಧಿಕ್ ಸುಂಬಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆಲಮೇಲ ಬಸವರಾಜ್ ತೆಲ್ಲೂರ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಆಲಮೇಲ, ಸೋಮು ಮೇಲಿನಮನಿ, ಬಸಲಿಂಗಪ್ಪ ಕತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕಡಣಿ ಸೇರಿದಂತೆ ಹಲವರಿದ್ದರು.

