ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಾಂಪ್ರದಾಯಿಕ ದಾಂಡಿಯಾ ನೃತ್ಯ ಇಂಡಿಯಲ್ಲಿ ಪ್ರಸಿದ್ದಿ ಗಳಿಸಿದೆ.
ನಗರದ ಶ್ರೀ ಅಂಬಾಭವಾನಿ ದೇವಸ್ಥಾನ, ಶ್ರೀ ದಾನಮ್ಮದೇವಿ ದೇವಸ್ಥಾನ, ದುರ್ಗಾ ಪರಮೇಶ್ವರಿ ಉತ್ಸವ ಮಂಢಳಿ, ಭುವನೇಶ್ವರಿ ಯುವಕ ಮಂಢಳಿ ಕುಂಬಾರ ಓಣಿ, ಶ್ರೀ ಅಂಬಾಭವಾನಿ ಯುವಕ ಮಂಡಳಿ ಹೂಗಾರ ಓಣಿ ಶ್ರೀ ಅಂಬಾಭವಾನಿ ಯುವಕ ಮಂಡಳಿ ಚವಡಿ ಓಣಿ ಯಲ್ಲಿ ಮಹಿಳೆಯರಿಂದ ದಾಂಡಿಯಾ ನೃತ್ಯ ನಡೆಯುತ್ತದೆ.
ನವರಾತ್ರಿ ಹಬ್ಬದಂದು ದುರ್ಗಾ ಪೂಜೆಯ ಜೊತೆಗೆ ಸಂಪ್ರದಾಯಿಕ ನೃತ್ಯ ದಾಂಡಿಯಾ ರಾಸ್ ಮೆರಗು ನೀಡುತ್ತದೆ. ಇದರ ಜೊತೆಗೆ ದಾಂಡಿಯಾ ಸ್ಪರ್ಧೇಗಳು ನೃತ್ಯ ಕಾರ್ಯಗಳು ನಡೆಯುತ್ತವೆ.
ಎಲ್ಲ ಸಮುದಾಯದ ಮಹಿಳೆಯರು ನಗರದ ವಿವಿಧ ನವರಾತ್ರಿ ಉತ್ಸವಗಳಲ್ಲಿ ಭಾಗಿಯಾಗಿ ದುರ್ಗಾ ಪೂಜೆ ಮತ್ತು ದಾಂಡಿಯಾ ಆಯೋಜನೆ ಗಮನ ಸೆಳೆಯುತ್ತದೆ.
ಸಂಜೆಯ ಪೂಜಾ ಕಾರ್ಯಕ್ರಮಕ್ಕೂ ಮುಂಚೆ ಮತ್ತು ಪೂಜಾ ಕಾರ್ಯಕ್ರಮದ ನಂತರ ದಾಂಡಿಯಾ ನೃತ್ಯ ವಿಶೇಷವಾಗಿ ಗಮನ ಸೆಳೆಯುತ್ತದೆ. ಶಾಲಾ ಕಾಲೇಜುಗಳಿಗೆ ರಜೆ ನಿಮಿತ್ಯ ವಿದ್ಯಾರ್ಥಿನಿಯರು ವಿಶೇಷವಾಗಿ ಪಾಲ್ಗೊಳ್ಳುವರು.
ಸಾಮಾನ್ಯವಾಗಿ ಸಂಜೆಯಾಗುತ್ತಿದ್ದಂತೆ ಗರ್ಭಾ ನೃತ್ಯವನ್ನು ಆಯೋಜಿಸುತ್ತಾರೆ, ಗರ್ಭಾ ನೃತ್ಯಕ್ಕೂ ದಾಂಡಿಯಾ ನೃತ್ಯಕ್ಕೂ ಸಣ್ಣ ಭಿನ್ನತೆ ಇದೆ. ಗರ್ಭಾ ನೃತ್ಯ ಪೂಜೆಯ ಮೊದಲು ನಡೆದರೆ ದಾಂಡಿಯಾ ನಂತರ ನಡೆಯುತ್ತದೆ. ಗರ್ಭಾ ನೃತ್ಯಕ್ಕೆ ಕೋಲಿನ ಅವಶ್ಯಕತೆ ಇಲ್ಲ, ದಾಂಡಿಯಾದಲ್ಲಿ ಕೋಲಾಟವೇ ಪ್ರಧಾನ, ದಾಂಡಿಯಾ ಕೇವಲ ನವರಾತ್ರಿಗೆ ಸೀಮಿತವಾಗಿಲ್ಲ, ಸಂತೋಷ ಕ್ಷಣಗಳೆಲೆಲ್ಲ ಇದು ವಿಜ್ರಂಬಿಸುತ್ತದೆ. ಹೆಚ್ಚಾಗಿ ಮಹಿಳೆಯರೇ ಭಾಗವಹಿಸುತ್ತಿದ್ದ ಈ ನೃತ್ಯದಲ್ಲಿ ಇತ್ತೀಚಿಗೆ ಪುರುಷರೂ ಹೆಜ್ಜೆ ಹಾಕುತ್ತಾರೆ. ಡೊಳ್ಳು ಕುಣಿತ ಭಕ್ತಿ ನಾಚ್ ಧನುಚಿ ನಾಚ ಪ್ರಮುಖ ಆಕರ್ಷಣೆಗಳಾಗಿವೆ.
ಇಲ್ಲಿ ಆಚರಿಸುತ್ತಿರುವ ನವರಾತ್ರಿ ಥೀಮ್ ಶತದಳ ಇದು ಶುದ್ದತೆ ಆದ್ಯಾತ್ಮಿಕ ಜಾಗೃತಿ ಮತ್ತು ಸಾಮರಸ್ಯವನ್ನು ಸಂಕೇತಿಸುತ್ತದೆ. ಈ ದುರ್ಗಾ ಪೂಜೆ ಕೂಡ ನೂರಾರು ಜನರ ಸಾಮೂಹಿಕ ಪ್ರಯತ್ನವಾಗಿದೆ.

