ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಡಿಸೆಂಬರ್ 13 ರಂದು ನಡೆಯಲಿರುವ ‘ವೃಕ್ಷಥಾನ್ ಹೆರಿಟೇಜ್ ರನ್’ ನಿಮಿತ್ತ ಏರ್ಪಡಿಸಲಾಗಿರುವ ಮನೆ ತೋಟ ಸ್ಪರ್ಧೆಗೆ ವಿಡಿಯೋ (ರೀಲ್ಸ್) ಅಪ್‌ಲೋಡ್ ಮಾಡಲು ಕೊನೆಯ ದಿನಾಂಕವನ್ನು ಅಕ್ಟೋಬರ್ 18 ರ ಬದಲಾಗಿ ನವೆಂಬರ್ 1 ರವರೆಗೆ ವಿಸ್ತರಿಸಲಾಗಿದೆ.
ಈ ಸ್ಪರ್ಧೆಯನ್ನು ನಿವೇಶನ ವಿಸ್ತೀರ್ಣ ಅನುಗುಣವಾಗಿ ಎರಡು ವಿಭಾಗಗಳಲ್ಲಿ ಏರ್ಪಡಿಸಲಾಗಿದೆ. ಗಿಡ-ಮರಗಳು, ಹೂ-ಹಸಿರು ಬಳ್ಳಿಗಳು ಹಾಗೂ ಹಸಿರು ಹೊದಿಕೆ ಹೆಚ್ಚಿಸುವ ಕ್ರಮಗಳನ್ನು ಅನುಸರಿಸಿದವರೆಲ್ಲರೂ ತಮ್ಮ ಕೈತೋಟದ ರೀಲ್ಸ್ (ವಿಡಿಯೋ) ಮಾಡಿ, ವಿಸ್ತರಿಸಲಾದ ನಿಗದಿತ ನವೆಂಬರ್ 1 ರ ಸಂಜೆ 5ಗಂ. ವರೆಗೆ ಈ ಕೆಳಗೆ ನೀಡಿರುವ ಸಂಪರ್ಕ ಬಳಸಿ ಅರ್ಜಿಯನ್ನು ಸಲ್ಲಿಸಬೇಕು: ಸಂಗಮೇಶ ಹಾವರಗಿ: 9448360474, ವಿಜಯಕುಮಾರ ಕೋರೆ: 7795172166, ಶಿವು ಕುಂಬಾರ: 9972795289
