ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರವರನ್ನು ವಜಾಗೊಳಿಸಬೇಕು. ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಢಾ.ಡಿ ಜಿ ಸಾಗರ ಬಣ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಅಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಜಿಲ್ಲಾ ಅಧಿಕಾರಿಗಳಾದ ಡಾ.ಆನಂದ ಕೆ ಅವರಿಂದ ಗೌರವಾನ್ವಿತ ರಾಷ್ಟ್ರಪತಿಗಳು ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣನವರ ಮಾತನಾಡಿ, ಮತದಾನದ ಹಕ್ಕು-೧೯೬೫ ರ ಕಾಯ್ದೆ ಪ್ರಕಾರವೇ ಗುರುತಿನ ಚೀಟಿ ನೀಡುವ ಅಥವಾ ರದ್ದುಪಡಿಸುವ ಪ್ರಕ್ರಿಯೆ ನಡೆಯಬೇಕು. ಎಸ್.ಐ.ಆರ್ ಬಗೆಗಿನ ತೀರ್ಮಾನಗಳನ್ನು ಮುಖ್ಯ ಚುನಾವಣಾ ಆಯುಕ್ತರು ಜ್ಞಾನೇಶಕುಮಾರ, ಉಳಿದ ಇಬ್ಬರೂ ಆಯುಕ್ತರನ್ನು ಕತ್ತಲಲ್ಲಿ ಇಟ್ಟು ಕಾನೂನು ಬಾಹೀರವಾಗಿ ಮತ್ತು ಏಕಪಕ್ಷೀಯವಾಗಿ ಕ್ರಮ ಕೈಗೊಂಡಿರುವುದರಿಂದ ಎಸೈಆರ್ ಅನ್ನು ರದ್ದುಗೊಳಿಸಬೇಕು. ಆಯುಕ್ತ ಜ್ಞಾನೇಶಕುಮಾರನ್ನು ವಜಾಗೊಳಿಸಬೇಕು. ಎಸೈಆರ್ ಪ್ರಕ್ರಿಯೆಯಿಂದಾಗಿ ದೇಶದಲ್ಲಿ ಒಟ್ಟು ೧೩ ಕೊಟ್ಟಿಕ್ಕಿಂತಲೂ ಹೆಚ್ಚು ಮತದಾರರ ಮತದಾನ ಹಕ್ಕನ್ನು ಮೊಟಕುಗೊಳಿಸಲಾಗಿದೆ. ಕಾರಣ ಎಸ್.ಐ.ಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಮೇಶ ಧರಣಾಕರ ಸಂ ಸಂಚಾಲಕರು ಮಹಾಂತೇಶ ಸಾಸಬಾಳ ಜಿಲ್ಲಾ ಮುಖಂಡರು ಸುನೀಲ ನಾಗಠಾಣ ಶಿವು ಗಣಿಯಾರ ನಾಗೇಶ್ ರೆಡ್ಡಿ ದುಂಡು ಬಾಣಿ ಗೌರೇಶ್ ಬಾಣಿ ಅವಿನಾಶ್ ಬಾನಿಕೋಲ ವಿನೋದ ನಾಗಾವಿ ಪರಮೇಶ್ವರ್ ಸಿಂಗೆ ದೇವೇಂದ್ರ ಬಾವಿಮನಿ ಪರಮೇಶ್ ಇಂಗಳೇಶ್ವರ ಚಂದ್ರಶೇಖರ್ ಮಲಕಣ್ಣವರ ಉಮಾಕಾಂತ ರಾಮಣ್ಣ ಮುದ್ದೇಬಿಹಾಳ ಆಕಾಶ ಹಿಪ್ಪರಗಿ ವಿಶ್ವನಾಥ ದೊಡಮನಿ ದುಂಡಪ್ಪ ನಾಟೀಕಾರ ಮಕ್ದುಮಸಾಬ ಪೀರಾಬಗೂಳ ಮತ್ತಿತರರು ಉಪಸ್ಥಿತರಿದ್ದರು.

