ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಲ್ಲಿ ಆಧ್ಯಾತ್ಮದಡಿಯಲ್ಲಿ ಹಸಿರು ನಾರಿನಾಂಶ ದುಂಬಿತ್ತು. ದುಗಾ೯ಮಾತೆಗೂ ಹೆಣ್ಣಿಗೂ ಶ್ರದ್ಧಾಭಕ್ತಾನು ರಸವೋತ್ಪತಿಯ ಅವಿನಾಭಾವ ಸಂಬಂಧದ ಜೀವಸತ್ವತೆ ಪವಿತ್ರತೆ ಹೊಂದಿತ್ತು.ನಾರಿಮಣಿಗಳ ಭಕ್ತಿಭಾವದ ಗರಿ ಹಸಿರೋನ್ನತದಲ್ಲಿ ಮೇಳೈಸಿತ್ತು!
ಐತಿಹಾಸಿಕ ಗುಮ್ಮಟ ನಗರಿಯ ರಾಜಾಜಿ ನಗರ ಬಡಾವಣೆಯಲ್ಲಿನ ನಾಡದೇವಿ ಮಂದಿರದಲ್ಲಿ ಶುಕ್ರವಾರ ಬೆಳಗಿನ ಜಾವ ಇಂಥದೊಂದು ಧಾಮಿ೯ಕ ಹಸಿರೋಲ್ಲಾಸದ ಭಕ್ತಿ ಕಲರವ ಮೂಡಿತ್ತು. ದೇವಿ ಅಂಗಳ ಭಕ್ತೆಯರ ಕಂಗಳಲ್ಲಿ ತುಂಬಿ ತುಳುಕಿತ್ತು. ದೈವಶಕ್ತಿಯ ಕೃಪಾ ಮಹಿಮೆ ಮನೋಜ್ಞವಾಗಿ ಪ್ರತಿಬಿಂಬಿಸುತ್ತಿತ್ತು. ಭಕ್ತೆಯರ ಉನ್ಮಾದದ ಭಕ್ತಿ ಪರಾಕಾಷ್ಠೆ ಸಂವೇದನಾಶೀಲತೆಯಿಂದ ಸಾಕ್ಷಾತ್ಕಾರಗೊಂಡಿತ್ತು!
ಹಸಿರು ಜೀವಾಳಗಳ ಭಕ್ತಿಭಾವದ ನಲಿದಾಟ ದೇವಿ ಮಂದಿರದಲ್ಲಿ ಮುಂಜಾವಿನ ವೇಳೆ ಅವ್ಯಾಹತವಾಗಿ ಸುತ್ತುವರೆದಿತ್ತು.ನವದುಗೆ೯ಯ ಒಲುಮೆಯಿಂದ ನವರಾತ್ರಿಯ ಆರನೇ ದಿನ ಅಪಾರ ಮೊಗಭಾವಗಳು ಹಸಿರು ಸುಗಂಧ ಲೇಪಿತ ವರ್ಣ ಅಲಂಕಾರಳಿಂದ ಚಿಗುರೊಡೆದು ದೇವಿ ಕಾತ್ಕಾಯೆನಿ ರೂಪ ಸ್ಮರಿಸ ದೀಪಾರತಿ ಬೆಳಗಿದವು. ಹಸಿರೇ ಉಸಿರು ಬಣ್ಣಗಂಧದ ಲವಲವಿಕೆ ಇಂಚರದಿಂದ ಆರಾಧನಾ ಭಕ್ತಿ ತರ್ಪಣದ ಕಾಯಕದಲ್ಲಿ ನಿರತವಾಗಿದ್ದವು.
ಬಡಾವಣೆಯ ಸ್ನೇಹಿತೆಯರಾದ ತೇಜಸ್ವಿನಿ ಅವಟಿ, ರೇಖಾ ಕುಚನೂರ, ನಾಗರತ್ನಾ ಕುಲಕರ್ಣಿ, ರಾಜೇಶ್ವರಿ ಕನ್ನೂರ, ಸುನೀತಾ ಜಾಧವ, ಲಕ್ಷ್ಮೀ ಕಂತಿಮಠ, ದಾಕ್ಷಾಯಣಿ ಅವಟಿ, ಮೇಘಾ ಗಾಯಕವಾಡ, ವಿಶಾಲಾಕ್ಷಿ ಬಡಿಗೇರ ಮೊದಲಾದ ಒಡನಾಡಿ ಸ್ನೇಹಿತೆಯರು ಸಮೃದ್ಧಿ,ಶಾಂತಿ ಸಂಕೇತದ ಹಸಿರು ಬಣ್ಣದ ಸೀರೆಯನ್ನುಟ್ಟು ದೇವಿ ಅಂಗಳ ಪ್ರವೇಶಿಸಿ ಪೂಜಾ ಕೈಂಕರ್ಯ ನೆರವೇರಿಸಿದರು.

